ನುಡಿಮತ್ತು
*ದೇವಾಲಯಕ್ಕೆ ನೀವು ಲಕ್ಷ
ನೀಡಿದರೂ ನೀವು ಭಕ್ತರು ಆದರೆ ಹಸಿದವರಿಗೆ ಅನ್ನ ನೀಡಿದರೆ ಅವರ ಪಾಲಿಗೆ ನೀನೆ ದೇವರು *ಧನವಿದ್ದವರೇ ಧನಿಕರಲ್ಲ, ಜ್ಞಾನವೇ ಧನದ ನಿಧಿ.------ಪಂಡಿತ ತಾರಾನಾಥ.
*ನಿಜವಾದ ಸಾಧಕರು ತಮ್ಮನ್ನೆ
ತಾವೇ ಹೊಗಳಿಕೊಳ್ಳುವುದಿಲ್ಲ ಅವರ ಸಾಧನೆಗಳೆ ಪರಿಚಯಿಸುತ್ತವೆ*
*ಮಾತೇ ಮನಸ್ಸಿನ ಕನ್ನಡಿ.ಮಾತಿನಂತೆ ಮನುಷ್ಯ. -----ಪಿ.ಸೈರಸ್.
*ಭೂಮಿಗೆ ಬಿತ್ತುವ ಒಂದೇ ಒಂದು
ಕಾಳು ಸಾಕು ಅದು ತೆನೆ ರೂಪದಲ್ಲಿ ಸಿಗುತ್ತದೆ, ಆಗಸದಿಂದ ಬೀಳುವ ಒಂದೊಂದೇ ಮಳೆ ಹನಿಗಳು ಸೇರಿ ನದಿಯಾಗಿ
ಹರಿಯುತ್ತವೆ, ನಾವು ಮಾಡುವ , ಆಡುವ , ಯೋಚಿಸುವ ಒಳ್ಳೆ ಮತ್ತು ಕೆಟ್ಟ ಕೆಲಸಗಳ ಮೇಲೆ ನಮ್ಮ ಮುಂದಿನ
ಜೀವನ ನಿರ್ಧಾರವಾಗಿರುತ್ತದೆ !!!
*ಹಸಿದವರಿಗೆ ನಮ್ಮಿಂದ ಊಟ ಹಾಕಲು ಆಗದಿದ್ದಾಗ, ಊಟ ಹಾಕುವವರ ಮನೆಯನ್ನಾದರೂ ತೋರಿಸಬೇಕು....................
ಗಳಗನಾಥ
*ಶಿಕ್ಷಣವೇ ಜೀವನದ ಬೆಳಕು - *ಗೊರೂರು
* ತಾಯಿಯ ಮಡಿಲು ಹಾಗೂ ತಮದೆಯ ಹೆಗಲು ಅತ್ಯಂತ ಪವಿತ್ರ ಸ್ಥಳಗಳು.
*ತಂದೆ ಇರುವವರಿಗೂ ಬೆವರಿನ ಬೆಲೆ ಗೊತ್ತಾಗುವುದಿಲ್ಲ ತಾಯಿ ಇರುವವರಿಗೆ
ಹಸಿವಿನ ಬೆಲೆ ಗೊತ್ತಾಗುವುದಿಲ್ಲ.
* ನಿನ್ನ ಜೀವನದಲ್ಲಿ ಈ ಇಬ್ಬರನ್ನು ಯಾವತ್ತು ಮರೆಯಬೇಡ. ನಿಮ್ಮ ಗೆಲುವಿಗಾಗಿ
ಎಲ್ಲವನ್ನು ಕಳೆದುಕೊಂಡ ನಿಮ್ಮ ತಂದೆ ನೀವು ನೋವಿನಲ್ಲಿದ್ದಾಗೆ ಪ್ರತಿಕ್ಷಣ ನಿನ್ನ ಬೆನ್ನಲುಬಾಗಿ
ನಿಂತಿರುವ ನಿಮ್ಮ ತಾಯಿ.
*ಇಂದು ಪ್ರಾಣಿಗಳ ಶಾಪದಿಂದ ಮಾಸ್ಕ ಹಾಕಿಕೊಂಡು ತಿರುಗಾಡುವ ನಾವು ಮುಂದೆ
ಮರಗಳ ಶಾಪದಿಂದ ಆಕ್ಸಿಜನ್ ಸಿಲಿಂಡರ್ ಹಾಕಿಕೊಂಡು ತಿರುಗಡಬೇಕಾಗುತ್ತದೆ ಅದಕ್ಕೆ ಮರ-ಗಿಡಗಳನ್ನು ಬೆಳೆಸಿ
ಪ್ರಕೃತಿ ಉಳಿಸಿ.
*ಸುಂದರವಾದ ಉಡುಪು ನಿಮ್ಮ ಸೌಂದರ್ಯ ಮೆರೆಸಬಹುದು ಆದರೆ ನಿಮ್ಮ ಗುಣ ನಿಮ್ಮ
ವ್ಯಕ್ತತ್ವವನ್ನೇ ಮೆರೆಸುತ್ತದೆ.
* ¤A¢¹zÀªÀgÀ
£Á°UÉAiÀÄ°è £À°zÁqÀĪÀAvÉ UÉ®è¨ÉÃPÀÄ, »AiÀiÁå½¹zÀªÀgÉà ¸ÀªÀiÁ䤸ÀĪÀAvÉ
UÉ®è¨ÉÃPÀÄ. zÀÆgÀ vÀ½îzÀªÀgÉ ¨Áa vÀ©âPÉÆ¼ÀÄîªÀAvÉ UÉ®è¨ÉÃPÀÄ UÉzÉÝ UÉ®ÄèªÉ
MAzÀÄ ¢£À UÉ®è¯Éà ¨ÉÃPÀÄ M¼ÉîvÀ£À
* ಒಂದು ಹನಿ ಮೊಸರು ಸೇರಿದರೆ ಹೇಗೆ ಒಂದು
ಹಾಲಿನ ಬಟ್ಟಲಿನ ಸಾವಿರ ಹನಿಗಳೂ ಕದಡಿಹೋಗುತ್ತವೆಯೋ ಹಾಗೆ ಸಾವಿರ ಸಕಾರಾತ್ಮಕ ಆಲೋಚನೆಗಳನ್ನೂ
ಒಂದು ನಕಾರಾತ್ಮಕ ಯೋಚನೆ ಕದಡಿಬಿಡತ್ತದೆ, ಹಾಗಾಗಿ ನಕಾರಾತ್ಮಕತೆಯಿಂದ ಜಾಗ್ರತೆಯಾಗಿರಬೇಕು -
ಅನಾಮಿಕ
* "ಮನುಷ್ಯನಿಗೆ ಯಾವಾಗ ಒಂದು ವಸ್ತು ಸುಲಭವಾಗಿ
ಸಿಗುವ ಹಾಗೆ ಇರುತ್ತೋ ಆಗ ಅದರ ಬೆಲೆ ಗೊತ್ತಿರುವುದಿಲ್ಲ, ಆದರೆ ಯಾವಾಗ ಆ ವಸ್ತುವಿನ ಬೆಲೆ ತಿಳಿಯುತ್ತದೋ
ಆಗ ಅದು ಸುಲಭವಾಗಿ ಸಿಗುವುದಿಲ್ಲ."
* ಹಡಗು ಎಷ್ಟೇ ಭಾರವಿದ್ದರೂ ಕಡಲ ಮೇಲೆ ತೇಲಲೇಬೇಕು
ಹಾಗೆ ಮನಸ್ಸು ಎಷ್ಟೇ ಭಾರವಾದರೂ ಬದುಕಿನ ಜೊತೆ ಸಾಗಲೇಬೇಕು.
* ನಂಬಿಕೆ ಅನ್ನುವುದು ತಾನಾತಿಯೇ ಬರಬೇಕೇ ವಿನಃ
ನನ್ನನ್ನು ನಂಬಿ ಅಂತ ಹೇಳಿಸಿಕೊಂಡು ಬರಬಾರದು ನಮ್ಮನ್ನು ನಂಬಿದವರು ನಮಗೆ ಗೊತ್ತಿರದೇ ನಮ್ಮ ಮೇಲೆ
ನಂಬಿಕೆ ಇಟ್ಟರೆ ಅದಕ್ಕಿಂತ ನಂಬಿಕೆ ಬೇರೊಂದಿಲ್ಲ, ನಂಬಿಕೆಯೇ ಜೀವನ
* ನಿಮ್ಮ ಬೆಳೆಸಿದ ಮತ್ತು ಹರಸಿದ ಕೈಗಳನ್ನು ಯಾವತ್ತು
ಮರೆಯಬಾರದು
* ಚಿಂತಿಸಿ ಬಡವನಾಗಬೇಡ ದುಡಿದು ಶ್ರೀಮಂತನಾಗು
* ಸೋತೆ ಎಂದು ನೀ ಮುಂದಿಟ್ಟ ಹೆಜ್ಜೆ ಹಿಂದಿಡಬೇಡ
ಯಾಕೆಂದರೆ ಯಾರಿಗೆ ಗೊತ್ತು ಆ ಹೆಜ್ಜೆ ನಿನ್ನ ಇತಿಹಾಸವನ್ನೇ ಸೃಷ್ಟಿ ಮಾಡಬಲ್ಲ ಹೆಜ್ಜೆಯಾಗಿರಬಹುದು
* ದುಡ್ಡಿಯಿಲ್ಲದವ ಬಡವನಲ್ಲ ಗುರಿ ಮತ್ತು ಕನಸು
ಇಲ್ಲದವನು ಬಡವ
* ಕೆಸರು ನೀರು ಸ್ವಲ್ಪ ಸೊತ್ತು ಬಿಟ್ಟರೆ ತಿಳಿಯಾಗುತ್ತದೆ.
ಬಿಸಿ ನೀರು ಸ್ವಲ್ಪ ನಂತರ ತಣ್ಣತೆ ಆಗುತ್ತದೆ ನಾವುಗಳು ಸ್ವಲ್ಪ ಹೊತ್ತು ಕಾದರೆ ಎಲ್ಲವೂ ನಮ್ಮ ನಿರೀಕ್ಷೆಗೆ ತಕ್ಕಂತೆ ಬದಲಾಗುತ್ತವೆ ಕಾಯುವ
ತಾಳ್ಮೆ ನಮ್ಮಲ್ಲಿ ಇರಬೇಕು ಅವಸರ ಪಟ್ಟರೆ ಎಲ್ಲವೂ ಹಾಳು
*ಗೆಳೆತನ ಮತ್ತು ಹಣ ಎರಡು ಸಮಾನವಾಗಿ ಕಾಣೀ ಯಾಕೆಂದರೆ
ಎರಡನ್ನು ಕಳೆದುಕೊಳ್ಳುವುದು ಸುಲಭ ಗಳಿಸುವುದು ಕಷ್ಟ
* ಬಿದ್ದಾಗ ನೋಡಿ ನಗುವ ನೂರು ಸಂಬಂಧಿಕರಿಗಿಂತ ಕೈ
ಹಿಡಿದು ಮೇಲಕ್ಕೇ ಎತ್ತುವ ಒಬ್ಬ ಸ್ನೇಹಿತ ಶ್ರೇಷ್ಠ
* ರೂಪಾಯಿ ಆದರೂ ರೂಪ ಆದರೂ ಅದು ತುಂಬಾ ದಿನ ಇರೋದಿಲ್ಲ
ಮನುಷ್ಯನ ಒಂದು ಒಳ್ಳೆತನ ಚಿರಕಾಲ ನೆನಪಿನಲ್ಲಿ ಉಳಿಯುತ್ತದೆ.
* ಪರಿಶುದ್ದವಾದ ಮನಸ್ಸು ಪರಿಪೂರ್ಣವಾದ ಮಾತು ಉತ್ತಮವಾದ
ಆಲೋಚನೆಗಳು ಮನುಷ್ಯನಿಗೆ ಗೌರವ ತಂದುಕೊಡುತ್ತವೆ.
* ಅನ್ನ ಇದ್ದರೆ ಉಪವಾಸವಿಲ್ಲ ಶಿಕ್ಷಣವಿದ್ದರೆ ವನವಾಸವಿಲ್ಲ
*ಓದುವುದು ಬರೆಯುವುದು ಕಲಿಯುವುದು ಶಿಕ್ಷಣವಲ್ಲ
ವಿನಯ ವಿವೇಕವನ್ನು ಕಲಿಯುವುದೇ ಶಿಕ್ಷಣ ವಿದ್ಯಾರ್ಥಿಗಳ ಲಕ್ಷಣ
* ದೇವರು ಇದ್ದಾನೋ ಇಲ್ಲವೋ ಗೊತ್ತಿಲ್ಲ ಆದರೆ ಅನ್ನ
ನೀಡುವ ರೈತನೇ ನಿಜವಾದ ದೇವರು
*ತಿಳಿದು ಬದುಕುವುದು ಮಾನವ ಧರ್ಮ ತಿಂದು ಬದುಕುವುದು
ಪ್ರಾಣಿ ಧರ್ಮ
ಕೆಟ್ಟ ನೆನಪುಗಳು ಸತ್ತ ಹೆಣವಿದ್ದಂತೆ, ಹೊತ್ತುಕೊಂಡು
ತಿರುಗಿದ್ದಷ್ಟು ಭಾರ, ಅವುಗಳನ್ನು ಸುಟ್ಟುಬೀಡಿ
*ದುಡಿಯುವವರಿಗೆ ಗೊತ್ತು ಮಣ್ಣಿನ ಬೆಲೆ ಬಡವನಿಗೆ
ಗೊತ್ತು ದುಡ್ಡಿನ ಬೆಲೆ ಹೆತ್ತವರಿಗೆ ಗೊತ್ತು ಹೆಣ್ಣಿನ ಬೆಲೆ ಈ ಮೂರು ತಿಳಿದವನಿಗೆ ಗೊತ್ತು ಜೀವನದ
ಬೆಲೆ.
*ಒಂದು ಎಲೆ ಉದುರುತ್ತಾ ಹೇಳಿತು ಈ ಜಗತ್ತಿನಲ್ಲಿ
ಯಾವುದು ಶಾಶ್ವತವಲ್ಲ ಅರಿತು ನಡೆ-ಇದೇ ಜೀವನ
*ಇತಿಹಾಸ ಓದುವಂತಹ ವ್ಯಕ್ತಿಗಳಾಗಬೇಡಿ ಇತಿಹಾಸ ನಿರ್ಮಿಸುವಂತಹ
ವ್ಯಕ್ತಿಗಳಾಗಿ.
*ಅಕ್ಷರ ಬಲ್ಲವ ಪಡೆದ ಎಲ್ಲವ
*ಅಕ್ಷರವಿದ್ದರೆ ಸುತ್ತಲು , ಇರುವುದಿಲ್ಲ ಕತ್ತಲು
*ಕಲಿತರೇ ವಿದ್ಯೆ ನೀವು, ನಿಮಗಿಲ್ಲ ಯಾವ ನೋವು
*ಶಿಕ್ಷಣ ಒಂದು ಅರ್ಥ ಕಳೆದುಕೊಂಡರೆ ವ್ಯರ್ಥ.
*ಅಕ್ಷರದ ಕಾಳು ನುಂಗಿದರೆ ಬಾಳು.
*ಕಲಿಯುವ ನಿನ್ನ ಆಸಕ್ತಿ ಅದುವೇ ನಿನ್ನ ನಿಜವಾದ
ಜೀವನ ಆಸ್ತಿ
*ಹಿಡಿದರೆ ವಿದ್ಯೆಯ ದಾರಿ ಗೆಲ್ಲುವೆ ನಗುವ ಬೀರಿ.
*ಅಕ್ಷರಗಳ ಮುತ್ತು ಪೋಣಿಸಿದರೆ ತುತ್ತು.
*ಎಲ್ಲಿ ಜ್ಞಾನ ಅಲ್ಲಿಲ್ಲ ಅಜ್ಞಾನ
*ತುಳಿದು ಬದುಕುವುದಕ್ಕಿಂತ ತಿಳಿದು ಬದುಕುವುದು
ಮುಖ್ಯ
ತುಳಿದು ಬದುಕಿವರು ಬೇಗ ಅಳಿಯುತ್ತಾರೆ ತಿಳಿದು ಬದುಕಿದವರು
ಅಳಿದ ಮೇಲು ಉಳಿಯುತ್ತಾರೆ.
*ನಾವು ತಿನ್ನುವ ಅನ್ನದ ಒಂದು ಕಾಳನ್ನೂ ಅಥವಾ ಕುಡಿಯುವ
ನೀರಿನ ಒಂದು ಹನಿಯನ್ನೊ ನಮ್ಮ ಸ್ವ ಶಕ್ತಿ ಯಿಂದ ಸೃಷ್ಟಿಸಲಾಗದು ಎಂದ ಮೇಲೆ ನಾವೆಷ್ಟು ಪರತಂತ್ರರೆಂದು
ಯೋಚಿಸಬೇಕಲ್ಲವೇ?
*ನೀರು ನಿಂತರೆ ಕೊಳೆತು ನಾರುತ್ತದೆ ಹರಿದು ಹೋದರೆ
ತೊಳೆದು ತಿಳಿಯಾಗುತ್ತದೆ ಅದಕ್ಕೆ ನಮ್ಮ ಜೀವನ ಹರಿಯುವ
ನೀರಾಗಬೇಕೆ ಹೊರತು ನಿಂತ ನೀರಾಗಬಾರದು
*ಸಹಾನುಭೂತಿ,ಸೌಂದರ್ಯ ಮತ್ತು ಸತ್ಯ ಈ ಮೂರು ಆದರ್ಶಗಳು
ನನ್ನ ದಾಯಿಯನ್ನು ಬೆಳಗಿವೆ ಮತ್ತು ಬದುಕನ್ನು ಉತ್ಸಾಹದಿಂದ ಎದುರಿಸಲು ಬೇಕಿರುವ ದೈರ್ಯವನ್ನು ನೀಡಿವೆ.
* ಟೀಕೆಗಳಿಗೆ ನಮ್ಮ ಜೀವನ, ವ್ಯಕ್ತಿತ್ವ, ನಡವಳಿಕೆಗಳೇ
ಉತ್ತರ ಹೇಳಬೇಕೇ ಹೊರತು ಮಾತಿನಿಂದ ಹೇಳಿ ಪ್ರಯೋಜನವಿಲ್ಲ.”*
* “ನಮ್ಮ ಮಾತಿಗೆ ಅರ್ಥ
ಬರಬೇಕಾದರೆ ಮಾತನಾಡುವಷ್ಟೇ ಮಾತನಾಡದೆ ಇರುವುದೂ ಅಗತ್ಯ.”*
* ವಿದ್ಯಾರ್ಥಿ
ಭತ್ತ ಬೆಳೆಯುವ ಗದ್ದೆಗಳಾಗಬೇಕು, ಬರಿಯ ಚೀಲಗಳಾಗಬಾರದು
* ರಸವೆ
ಜನನ, ವಿರಸ ಮರಣ, ಸಮರಸವೇ ಜೀವನ!
* ಓದಿ
ಮರುಳಾಗಬಾರದು; ಓದದೆಯೂ ಮರುಳಾಗಬಾರದು; ಓದಿ ಹುರುಳಾಗಬೇಕು.
* ಮಾತು
ಮನಸ್ಸುಗಳನ್ನು ಒಂದುಗೂಡಿಸಬೇಕೆ ಹೊರತು ಒಡೆಯಬಾರದು
* ಬೇರೆಯವರನ್ನು
ತೆಗಳುವುದರಿಂದ ನಿಮ್ಮ ವ್ಯಕ್ತಿತ್ವಕ್ಕೇ ಹೆಚ್ಚು ಕುಂದುಂಟಾಗುತ್ತದೆ.
* ಹೃದಯಕ್ಕೇ ಅರಿವಾಗುವುದು ವಾತ್ಸಲ್ಯ ಮನಸ್ಸಿಗೆ ಅರಿವಾಗುವುದು ಪ್ರಿತಿ ಬಹುದ್ದಿ ಅರಿವಾಗುವುದು ಜ್ಞಾನ ಆತ್ಮಕ್ಕೆ ಅರಿವಾಗುವುದು ಧ್ಯಾನ ತನ್ನನ್ನು ತಾನು ಅರಿಯುವುದೇ ಜೀವನ
* ಹೃದಯಕ್ಕೇ ಅರಿವಾಗುವುದು ವಾತ್ಸಲ್ಯ ಮನಸ್ಸಿಗೆ ಅರಿವಾಗುವುದು ಪ್ರಿತಿ ಬಹುದ್ದಿ ಅರಿವಾಗುವುದು ಜ್ಞಾನ ಆತ್ಮಕ್ಕೆ ಅರಿವಾಗುವುದು ಧ್ಯಾನ ತನ್ನನ್ನು ತಾನು ಅರಿಯುವುದೇ ಜೀವನ
* ದೇವರು ನಮಗೆ
ಜೀವನವನ್ನಲ್ಲ , ಜೀವವನ್ನಷ್ಟೆ ಕೊಟ್ಟ .
ಹೇಗೆ ಜೀವಿಸಬೇಕೆಂಬುದನ್ನು ಅವ ನಮಗೆ ಬಿಟ್ಟುಕೊಟ್ಟ.
* ನೀರು ನಿಂತರೆ, ಕೊಳೆತು ನಾರುತ್ತದೆ. ಹರಿದು ಹೋದರೆ ತೊಳೆದು ತಿಳಿಯಾಗುತ್ತದೆ . ನಮ್ಮ ಜೀವನ ನಿಂತ ನೀರಾಗಬಾರದು; ಅದು ಹರಿಯುವ ಹೊಳೆಯಾಗಬೇಕು!
* ಜೀವನದಲ್ಲಿ ಕಷ್ಟಗಳು ನಮ್ಮನ್ನು ನಾಶಗೊಳಿಸಲು ಬರೋದಿಲ್ಲ. ಬದಲಾಗಿ ನಮ್ಮನ್ನು ಇನ್ನಷ್ಟು ಬಲಿಷ್ಟವಾಗಿಸಲು ಬರುತ್ತಿರುತ್ತದೆ !
* ಅಲೆಗಳೇ ಇಲ್ಲದ ಶಾಂತ ಸಮುದ್ರ. ಸಮರ್ಥ ಈಜುಗಾರನನ್ನು ಸೃಷ್ಟಿಸಲಾರದು. ಅಂತೆಯೇ ಏಳುಬೀಳುಗಳಿಲ್ಲದ ಜೀವನ, ಸಶಕ್ತ, ಸಮರ್ಥ ವ್ಯಕ್ತಿಯನ್ನೆಂದೂ ನಿರ್ಮಿಸಲಾರದು .
*ಜೇಬು ಖಾಲಿಯಾದಾಗ, ಎದುರಾಗುವ ಒಂದೊಂದು ತಿರುವು ಕೂಡಾ ಒಂದೊಂದು ಪಾಠವನ್ನು ಹೇಳಿಕೊಡುತ್ತದೆ .
ಆದರೆ ಜೇಬು ತುಂಬಿದಾಗ ಎದುರಾಗುವ ಪ್ರತಿಯೊಂದು ತಿರುವು ಕೂಡಾ ನಮ್ಮನ್ನು ದಾರಿ ತಪ್ಪುವಂತೆ ಮಾಡುತ್ತದೆ.
*ಸಾವಿರ ಕಾಗೆಗಳು ಕೂಗಾಡಿದರೇನು* *ಒಂದು ಕೋಗಿಲೆಯ ಧ್ವನಿಯನ್ನು ಸರಿದೂಗಿಸಲಾಗದು....!!*
*ಸಾವಿರ ಜನ ಕೊಂಕು ಮಾತಾಡಿದರೇನು ಒಬ್ಬ ಒಳ್ಳೆಯ ವಕ್ತಿಯ ವಕ್ತಿತ್ವವನ್ನು ವಿರೂಪಗೊಳಿಸಲಾಗದು...!!*
*ನೋಡಲು ಕಣ್ಣಿದೆ ಎಂದು ಖುಷಿ ಪಡುವ ಮುನ್ನವೇ ಕಂಬನಿಯ ಪರಿಚಯ ಮಾಡುವನು ಆ ಭಗವಂತ.*
*ಎಷ್ಟು ಜನ ಗೆಳೆಯರು ಇದ್ದರೇನು ಕಷ್ಟ ಕಾಲವೇ ತೋರಿಸುವುದು, ನಿನ್ನ ಆಪ್ತರು ಯಾರಂತ.*
*ಇನ್ನೊಬ್ಬರ ಯೋಗ್ಯತೆಯನ್ನು ಅಳೆಯುವ ಕೆಲಸ ನಮ್ಮದಲ್ಲ. ಅದರ ಬದಲು ಇತರರ ಯೋಗ್ಯತೆಯನ್ನು ಗೌರವಿಸುತ್ತಾ, ನಮ್ಮ ವ್ಯಕ್ತಿತ್ವವನ್ನು ಎತ್ತರಿಸಿಕೊಳ್ಳೋಣ*.
*ಒಳ್ಳೆಯವರು ಸಂತಸ ಕೊಡುತ್ತಾರೆ,* *ಕೆಟ್ಟವರು ಅನುಭವ ನೀಡುತ್ತಾರೆ,* *ದುಷ್ಟರು ಪಾಠ ಕಲಿಸುತ್ತಾರೆ,* *ಉತ್ತಮರಾದವರು ಸವಿನೆನಪು ಕೊಡುತ್ತಾರೆ, ಅದ್ದರಿಂದ ಎಂಥ ಜನರನ್ನೂ ನಾವು ದೋಷಿಸಬಾರದು ಎಲ್ಲಾರಿಂದಲೂ ಒಂದಲ್ಲ ಒಂದು ರೀತಿಯ ಪಾಠ ಕಲಿಯಬಹುದು.*
*ಮರಗಳು ಎಂದೂ ಉದುರಿದ ಹೂಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ.ಮತ್ತೆ ಹೊಸ ಹೂಗಳನ್ನು ಬಿಡುವದರಲ್ಲೇ ಮಗ್ನವಾಗಿರುತ್ತವೆ.
*ಬದುಕಿನಲ್ಲೂ ನಾವು ಕಳೆದುಕೊಂಡಿರುವುದೇನು ಮುಖ್ಯವಲ್ಲ. ಮತ್ತೆ ಹೇಗೆ ಬೆಳೆಯಬಲ್ಲೆವು ಎನ್ನುವುದು ಮುಖ್ಯ.

No comments:
Post a Comment